ನನ್ ಹೆಸರು ಪೂರ್ವ!ನನ್ನ ಕೈಯಲ್ಲಿ ಮದರಂಗಿ ಹಾಕ್ತಾಇದ್ರೂ. ಮಾರನೇ ನನ್ನ ಮದ್ವೆಯ ದಿನವಾಗಿತ್ತು.ನನ್ ಮದ್ವೆ ಇಸ್ಟ್ ಬೇಗ ಆಗ್ತಾ ಇತ್ತು ಅಂದ್ರೆ ನಂಗೆಯೋಚನೆ ಮಾಡಲು ಕೂಡ ಸಮಯ ಸಿಗ್ಲಿಲ್ಲ!ನಾನು ಮದ್ವೆಯ ತುಂಬಾ ಕನಸು ಕಂಡಿದ್ದೆ!ನನ್ ಮದ್ವೆ ಒಂದು ವಾರದಲ್ಲೇ ಮಡಗಿದ್ರು.ನಂಗೆ ಗೊತ್ತಿರ್ಲಿಲ್ಲ ಎಲ್ಲಾ ಇಷ್ಟ ಬೇಗ ಆಗುತ್ತೆ ಅಂತನನ್ನ ಮನೆಯಲ್ಲಿ ನಾನು ನನ್ ಅಪ್ಪ ಮಾತ್ರ ಇರ್ತಇದ್ದದ್ದು.ನಾವು ಇಬ್ಬರು ಹೆಣ್ಮಕ್ಳು ಇದ್ವು, ನನ್ ಅಕ್ಕನಮದ್ವೆ ಆಗಿತ್ತು.ಅವ್ಳು ಹೊರದೇಶಕ್ಕೆ ಮದ್ವೆ ಆಗಿಅಲ್ಲೇ ಇರ್ತ ಇದ್ಲು. ನಾನು ಹೆಚ್ಚಾಗಿ ಒಬ್ಳೆ ಇರ್ತ ಇದ್ದೆ.ನನ್ ಅಕ್ಕನ್ ಮದ್ವೆ ಆದ ಸ್ವಲ್ಪ ದಿನದಲ್ಲಿ ನನ್ ಅಮ್ಮನಸಾವು ಆಗಿತ್ತು. ಆದ್ದರಿಂದ ನಾನು ಒಬ್ಬಳೇ ಇರು ಹಾಗೆಆಯ್ತು. ನನ್ನಪ್ಪ ಯಾವಾಗಲೂ ಮನೆಯಿಂದ ಹೊರಗಡೆಇರುತ್ತಿದ್ದರು. ಒಂದು ದಿನ ಸಡನ್ನಾಗಿ ನನ್ನ ಅಪ್ಪನ ಬೈಕಿಗೆಆಕ್ಸಿಡೆಂಟ್ ಆಗಿತ್ತು. ನನ್ನಪ್ಪನಿಗೆ ಸ್ವಲ್ಪ ಪೆಟ್ಟು ಆಗಿತ್ತು.

ನನ್ನಕ್ಕ ತುಂಬಾ ಪ್ರಯತ್ನ ಪಟ್ಲು ನನ್ನಪ್ಪ ನನ್ನ ನೋಡಲುಬರಕ್ಕೆ! ಆದ್ರೆ ಅವಳು ಪ್ರಗ್ನೆಂಟ್ ಆಗಿದ್ಲು, ನಾನೇಅವಳನ್ನು ಬರಬೇಡ ಅಂತ ಹೇಳಿದ್ದೆ. ನಾನು ಹೇಳಿದನಿನ್ ಟೆನ್ಶನ್ ಮಾಡ್ಕೋಬೇಡ ನಾನೇ ನನ್ನಪ್ಪನನೋಡ್ಕೋತೀನಿ ಅಂತ. ಸ್ವಲ್ಪ ದಿನಗಳಲ್ಲಿ ಅಪ್ಪ ಏನುಸರಿಯಾಗಿದ್ದರೂ. ಆದ್ರೆ ಆಗ್ಲಿಂದ ನನ್ ಅಕ್ಕನಿಗೆ ನನ್ನಟೆನ್ಶನ್ ಆಗಿತ್ತು. ಯಾಕೆಂದ್ರೆ ಅಪ್ಪನಿಗೆ ಈಗ ಯಾವುದೇಕೆಲಸ ಮಾಡಲು ಆಗ್ತಾ ಇರಲಿಲ್ಲ. ಅವರಿಗೆ ಆಕ್ಸಿಡೆಂಟ್ ಆದಾಗ ಕಾಲಿಗೆ ತುಂಬಾ ಹೆಚ್ಚಾಗಿ ಪೆಟ್ಟು ಬಿದ್ದಿತ್ತು.ಇದರಿಂದ ಅವರಿಗೆ ಸರಿಯಾಗಿ ನಡಿಯೋಕು ಆಗ್ತಾಇರಲಿಲ್ಲ. ಮತ್ತೆ ಅಂಗಡಿಗು ಹೋಗಕ್ ಆಗ್ತಾ ಇರಲಿಲ್ಲ. ನನ್ನಪ್ಪನಿಗೆ ಪಾತ್ರೆಗಳ ಅಂಗಡಿ ಇತ್ತು. ಅಂಗಡಿನಮ್ಮನೆಯಿಂದ ತುಂಬ ದೂರವಾಗಿತ್ತು. ನನಗೂ ಇಷ್ಟಇರ್ಲಿಲ್ಲ ನಾನಪ್ಪಾ ಇಂಥ ಕಂಡಿಷನ್ನಲ್ಲಿ ಯಾವುದೇ ಕೆಲಸಮಾಡಲಿ ಅಂತ. ನಾನು ಅಪ್ಪನಿಗೆ ಹೇಳಿದ್ದೆ, ನೀವುಮನೇಲಿ ಆರಾಮ ಮಾಡಿ ಅಂತ. ಮತ್ತೆ ನಾನೇ ಸ್ಕೂಲ್ಗೆ ಟೀಚಿಂಗ್ ಕೆಲಸ ಮಾಡಲು ಹೋದೆ! ನಾನು ತುಂಬಾಓದಿದ್ದೆ! ಅಪ್ಪನಿಗೆ ನನ್ ಮೇಲೆ ಬೇಜಾರ್ ಆಗ್ತಾ ಇತ್ತು. ಅಪ್ಪ ಮತ್ತು ಅಕ್ಕ ಫೋನ್ನಲ್ಲಿ ಮಾತಾಡುವಾಗ ನನ್ನ ಬಗ್ಗೆಮಾತಾಡ್ತಾ ಇದ್ರು. ಅವರಿಬ್ರಿಗೂ ನನ್ನದೇ ಚಿಂತೆ ಆಗಿತ್ತು. ನಾನಪ್ಪ ಆಕ್ಸಿಡೆಂಟ್ ಆದ ನಂತರ ಯಾವಾಗಲೂಟೆಂಶನ್ ಅಲ್ಲಿ ಇರ್ತಿದ್ರು, ಎಲ್ಲಾದ್ರೂ ಆಕ್ಸಿಡೆಂಟ್ ಆದಾಗನನ್ನ ಜೀವ ಹೊರಟೋಗಿದ್ರೆ! ನನ್ ಮಗಳನ್ನು ಯಾರುನೋಡ್ಕೋತಿದ್ರು. ಮತ್ತೆ ಅವಳು ಯಾರ ಜೊತೆ ಇರುತ್ತಇದ್ಲು. ಇದೇ ಚಿಂತೆ ಅವರಿಗೆ ಕಾಡೋಕೆ ಸ್ಟಾರ್ಟ್ ಆಗಿತ್ತು. ಹೇಗೆ ನಾನು ಟೀಚಿಂಗ್ ಸ್ಟಾರ್ಟ್ ಮಾಡಿ ಎರಡುತಿಂಗಳಾಗಿತ್ತು. ಒಂದು ದಿನ ನಾನು ಸ್ಕೂಲಿಂದ ಮನೆಗೆಬಂದಾಗ ನಮ್ಮನೇಲಿ ಯಾರೋ ನೆಂಟರು ಬಂದಿದ್ರು. ನಾನು ಹೋಗಿ ನೋಡಿದಾಗ ಒಬ್ಬ ವಯಸ್ಸಾದಅಂಕಲಿದ್ರು. ನಾನು ಅವರನ್ನು ನೋಡಿ ಸೀದಾ ರೂಮಿಗೆಹೊರಟೊದೆ! ಅದು ಸ್ವಲ್ಪ ಹೊತ್ತಿನ ಬಳಿಕ ಅವರುನಮ್ಮನೆಯಿಂದ ಹೊರಟೋದ್ರು. ನಾನಪ್ಪನತ್ರ ಕೇಳ್ದೆ! ಇದು ಯಾರಪ್ಪ ಅಂತ ಕೇಳಿದೆ. ಆಗ ಅಪ್ಪ ಹೇಳಿದ್ರುನಿನ್ನ ಸಂಬಂಧ ತಗೊಂಡು ಬಂದಿರೋರು ಅಂತಹೇಳಿದ್ರು. ಇವರು ನಮ್ ಹಿಂದಿನ ಗಲ್ಲಿಯಲ್ಲಿ ಇರೋರು! ಇವರ ಮಗ ತುಂಬಾ ಓದಿದ್ದಾನೆ ಮತ್ತೆ ಒಳ್ಳೆ ಹುಡುಗ ಇವರು ಒಂದು ಐದು ತಿಂಗಳ ಆಗಿದ್ದಷ್ಟೇ ಹಿಂದಿನ ಗಲ್ಲಿಗೆಬಂದು. ಇವರು ನಿನ್ನ ಸ್ಕೂಲ್ಗೆ ಹೋಗೋದು ಬರದನ್ನ ನೋಡಿ ನಿನ್ನ ಇಷ್ಟ ಪಟ್ಟಿದ್ರು, ಹಾಗೆ ನಿಂಗೆ ಸಂಬಂಧತೆಕೊಂಡು ಬಂದ್ರು. ನಾನು ಅಪ್ಪನಿಗೆ ಹೇಳಿದೆ ಅಪ್ಪ ನಾನಿಮ್ಮನ್ನ ಬಿಟ್ಟು ಎಲ್ಲಿಗೂ ಹೋಗಕ್ಕೆ ಇಷ್ಟ ಪಡಲ್ಲ! ಅಯ್ಯೋ ಮಗಳೇ ನಮ್ಮ ಮಾತನ್ನು ಅರ್ಥ ಮಾಡ್ಕೋ ಯಾವಾಗ್ಲೂ ನಿನ್ನ ಅಕ್ಕ ಮತ್ತೆ ನಾನು ಟೆನ್ಶನ್ ಅಲ್ಲಿ ಇರ್ತೀವಿ ನಿನ್ ಬಗ್ಗೆ ಯೋಚನೆ ಮಾಡ್ಕೊಂಡ್! ಮತ್ತೆ ನಾವಿಬ್ರು ನೀನು ನೀನ್ ಮನೆ ಯಾ ವಳಾಗ್ಲಿಅಂತ ಇದ್ದಿವಿ.ಅದ್ರ ನಂತರ ನಂಗೆ ಏನಾದ್ರು ನಂಗೆಚಿಂತೆ ಇರಲ್ಲ!ಮತ್ತೆ ಅಪ್ಪ ನಂಗೆ ತುಂಬಾಸಂಜಾಯಿಸಿದ್ರೂ ಮತ್ತೆ ಹೇಳಿದ್ರು ನೀನು ಅವ್ರ ಮನೆಯಲ್ಲಿ ತುಂಬಾ ಚೆನ್ನಾಗಿ ಇರ್ತಿಯ!ಯಾಕೆಂದರೆ ಹುಡುಗತುಂಬಾ ಒಳ್ಳೆಯವನು.ಮಗಳೇ ಅವ್ರು ಕೇಳೋಕೊಂಡುಹೋಗಿದ್ರು ಆದ್ರೆ ಇವತ್ತು ಅವ್ರು ಉತ್ತರದ ಪ್ರತಿಕ್ಷೆ ಯಲ್ಲಿಇದ್ದಾರೆ. ಮಗಳೇ ನಾನು ಅವ್ರಿಗೆ ಸಮ್ಮತಿ ಇದೆ ಅಂತಹೇಳ್ತೀನಿ ಇದ್ರಿಂದ ನಿಂಗೇನು ಅಭ್ಯಾನಂತರ ಇಲ್ವಲ್ಲ!ನಂಗೆ ಇದರಿಂದ ಏನ್ ಅಭ್ಯನಂತರ ಇರುತ್ತೆ. ನಾನುಹೇಳ್ದೆ ಅಪ್ಪ ನಿಮಗೆ ಎಲ್ಲಿ ಇಷ್ಟ ಇದ್ದೀಯೋ ಅಲ್ಲಿ ನಾನುಮದ್ವೆ ಆಗಲು ರೆಡಿಯಾಗಿ ಇದ್ದೀನಿ ಅಂತ.ಅವತ್ತು ವಿವೇಕ್ ವರ್ಮಾ ಮತ್ತೆ ಅವ್ರ ಮಗ ಅಭಿಷೇಕ್ ವರ್ಮಾ ಬಂದಿದ್ರು. ಆಗ ನಾನು ಮನೆಯಲ್ಲೇ ಇದ್ದೆ!ಆದ್ರೆ ನಾನುಅಭಿಷೇಕ್ ನಾ ನೋಡಿದ್ ತಕ್ಷಣ ತಲೆ ಬಗ್ಗಿಸಿಬಿಟ್ಟೆ!ಅಭಿಷೇಕ್ ಅಪ್ಪ ಅನ್ಕೊಂಡ ಹಾಗೆ ಇದ್ದ. ಅಪ್ಪನಿಗೆ ಅಭಿಷೇಕ್ ತುಂಬಾ ಇಷ್ಟ ಆದ. ಆದ್ರೆ ಒಂದು ವಿಚಿತ್ರಅಂದ್ರೆ ಅವ್ರ ಮನೆಯಿಂದ ಒಬ್ಬ ಹೆಂಗಸು ಕೂಡಬಂದಿರ್ಲಿಲ್ಲ.ಮತ್ತೆ ಅವ್ನ ಅಪ್ಪ ಹೇಳಿದ್ರು ನಂಗೆಇನ್ನೊಬ್ಬ ದೊಡ್ಡ ಮಗ ಇದ್ದಾನೆ ಅವ್ನು ಅಮೇರಿಕಾ ದಲ್ಲಿಕೆಲಸ ಮಾಡ್ತಾ ಇದ್ದಾನೆ. ಮನೆಯಲ್ಲಿ ನಾನು ಮತ್ತೆಅಭಿಷೇಕ್ ಇರೋದು!ಮತ್ತೆ ಅವ್ರು ಹೇಳಿದ್ರು ನಾವುಮದ್ವೆಯನ್ನ ತುಂಬಾ ಸಿಂಪಲ್ ಆಗಿ ಮಾಡೋದಕ್ಕೆ ಇಷ್ಟಪಡ್ತಿವಿ!ಮತ್ತೆ ಬೇಗ ಮದ್ವೆ ಮಾಡಬೇಕು!ಆಗ ಅಪ್ಪಯಾವಾಗ್ ಮದ್ವೆ ಮಡಗೋಕೆ ಇಷ್ಟ ಪಡ್ತಿರಿ ನೀವು!ಆಗ ಅವ್ರು ಹೇಳಿದ್ದನ್ನ ಕೇಳಿ ನಾನು ಶಾಕ್ ಆಗಿಬಿಟ್ಟೆ!ಆದ್ರೆ ಅವ್ರಿಗೆ ಇಷ್ಟ ಅರ್ಜೆಂಟ್ ಆದ್ರೂ ಯಾಕಿತ್ತು!ಅವ್ರು ಒಂದು ವಾರದಲ್ಲೇ ಮದ್ವೆ ಮಡಗಿ ಅಂತಹೇಳಿದ್ರು. ಮತ್ತೆ ಹೇಳಿದ್ರು ನಂಗೆ ಸುಮ್ನೆ ಖರ್ಚ್ಮಾಡೋದೆಲ್ಲ ಇಷ್ಟ ಇಲ್ಲ ಬರಿ ಮದ್ವೆ ಮಾತ್ರಇಂಪಾರ್ಟೆಂಟ್ ಅಷ್ಟೇ!ಬರಿ ಮದ್ವೆ ಮಾಡಿ ನನ್ ಸೊಸೆನನಮ್ ಮನೆಗೆ ಕರ್ಕೊಂಡು ಹೋಗತೀವಿ. ನನ್ ಅಪ್ಪನಿಗೆ ಬುದ್ದಿವಂತದ ಮಾತು ಅನ್ಸಿತ್ತು.ಅಪ್ಪ ಒಂದು ಕಡೆಖುಷಿಯಾಗಿ ಇದ್ರೂ. ಆದ್ರೂ ಟೆನ್ಶನ್ ಕೂಡ ಇತ್ತು.ಒಂದು ವಾರದಲ್ಲಿ ಹೇಗೆ ಎಲ್ಲವನ್ನು ಅರೇಂಜ್ ಮಾಡ್ತಾರೆಅಂತ.ನನ್ನ ಮಾವ ನನ್ನ ಅಪ್ಪ ನಾ ಮುಖ ನೋಡಿಅಯ್ಯೋ ನಮಗೆ ನಿಮ್ ಮಗಳು ಬಿಟ್ರೆ ಬೇರೆ ಏನು ಬೇಡ!ಅಂತ ಸಮಾಧಾನ ಮಾಡುದ್ರು.ಅವ್ರ ಈ ಮಾತೆಲ್ಲಕೇಳಿ ತಕ್ಷಣ ಅಪ್ಪ ಒಪ್ಪಿಕೊಂಡ್ರು ಮತ್ತೆ ಹೇಳಿದ್ರುಬರೋ ವಾರದಲ್ಲೇ ಮದ್ವೆ ಆಗ್ಲಿ ಅಂತ.ಆದ್ರೆ ನಂಗೆಗಾಬರಿಯಾಗಿತ್ತು ಎಲ್ಲಾ ಬೇಗ ಬೇಗ ಆಗಿತ್ತು.ಆದ್ರೂ ಒಂದು ವಾರಣೆ ಇದ್ದದ್ದು ನನ್ ಮದ್ವೆಗೆನಂಗೆ ತುಂಬಾ ತಯಾರಿಗಳು ಇದ್ವು. ನಾನು ಮದುಮಗಳಾಗಿದ್ದೆ!ಹಾಗೆ ನಾನು ಸಂಪೂರ್ಣ ವಾಗಿತಯಾರಿಯಲ್ಲಿ ಇದ್ದೆ!ಆದ್ರೆ ಒಂದು ಕಡೆ ಅಪ್ಪನನ್ನುನೋಡಿ ದುಃಖ ಕೂಡ ಆಗ್ತಾ ಇತ್ತು. ಆದ್ರೆ ಅಪ್ಪ ನಂಗೆಸಮಾಧಾನ ಮಾಡ್ತಾ ಇದ್ರೂ ಅಯ್ಯೋ ಮಗಳೇಎಲ್ಲಾ ಹೆಣ್ಮಕ್ಳು ಒಂದಲ್ಲ ಒಂದು ದಿನಾ ಮದ್ವೆ ಆಗಿಅವ್ರ ಮನೆಯವರಗ್ತಾರೆ!ಮತ್ತೆ ಅಪ್ಪ ಅಮ್ಮ ಒಂಬಂಟಿಯಾಗಿ ಜೀವನ ಮಾಡತಾರೆ ಅಂತ.ನಂಗೆ ನೀನುನಿನ್ ಗಂಡನ್ ಮನೆಯಲ್ಲಿ ಸುಖವಾಗಿ ಇರು. ಇದೊಂದೇಆಸೆ ನಂದು ಬೇರೆ ಏನು ಬೇಡ ಅಂತ ಹೇಳ್ತ ಇದ್ರೂ.ನನ್ ಅಕ್ಕನಿಗೆ ಅಲ್ಲಿಂದ ಬರೋದಕ್ಕೆ ಆಗ್ಲಿಲ್ಲ. ಇಸ್ಟ್ಬೇಗ ಬೇಗ ಆಗಿತ್ತು. ಮತ್ತೆ ಈ ಸ್ಥಿತಿ ಯಲ್ಲಿ ಅವ್ರಿಗೆಬರೋದಕ್ಕೂ ಆಗ್ತಾ ಇರ್ಲಿಲ್ಲ.ಮತ್ತೆ ಅಪ್ಪನು ಮದ್ವೆಗೆಯಾರನ್ನು ಇನ್ವೆಟ್ ಮಾಡಿರ್ಲಿಲ್ಲ. ಅಕ್ಕ ನಿನ್ಮದ್ವೆಯಾಗಿ ನಿನ್ ಗಂಡನ್ ಮನೆಗೆ ಬರ್ತೀನಿ ಅಂತಹೇಳ್ತ ಇದ್ಲು.ಆದ್ರೆ ಅಪ್ಪನಿಗೆ ಆಸೆ ಇತ್ತು. ನನ್ಮದ್ವೆನೂ ಅಕ್ಕನ್ ಮದ್ವೆ ಹಾಗೆ ದುಮ್ ದಾಂ ಆಗಿಮಾಡಬೇಕು ಅಂತ ಅಕ್ಕನ್ ಮದ್ವೇಲಿ ಅಪ್ಪನಿಗೆ ಎಲ್ಲಾಇತ್ತು. ಅಮ್ಮನು ಜೊತೆಗೆ ಇದ್ರೂ.ಆದ್ರೆ ನನ್ ಮದ್ವೆಇಸ್ಟ್ ಬೇಗ ಆಗ್ತಾ ಇರೋದ್ರಿಂದ ಅಪ್ಪನಿಗೆ ಏನುಮಾಡೋದಕ್ಕೆ ಆಗ್ತಾ ಇರ್ಲಿಲ್ಲ. ಎಲ್ಲಾ ದುಡ್ಡು ಅವ್ರಆಕ್ಸಿಡೆಂಟ್ ಆಗಿ ಅವ್ರಿಗೆ ಖರ್ಚ್ ಆಗಿತ್ತು.ನಂಗೆ ತುಂಬಾಗಾಬರಿಯಾಗ್ತಾ ಇತ್ತು. ಆದ್ರೆ ಒಂದು ನನ್ ಗಂಡತುಂಬಾ ಒಳ್ಳೆಯವನು ಅಂತ ಇತ್ತು ಮನಸ್ಸಲ್ಲಿ.ಹಾಗೆ ನನ್ ಮದ್ವೆ ಬಂತೂ ನಂಗೆ ಖುಷಿ ಕೂಡಇತ್ತು ಮತ್ತೆ ದುಃಖ ನೂ ಆಗ್ತಾ ಇತ್ತು. ಕೊನೆಗೆ ನನ್ಮದ್ವೆ ಆಯ್ತು ನಾನು ನನ್ ಅಪ್ಪ ಅಪ್ಪಿಕೊಂಡು ಅಳ್ತಾಇದ್ವಿ. ಮತ್ತೆ ಗಂಡನ್ ಮನೆಗೆ ಬಂದೆ!

!ನನ್ ಅಕ್ಕನ್ಹಾಗೆಯೇ ಅಭಿಷೇಕ್ ಅಣ್ಣನಿಗೂ ಮದ್ವೆಗೆ ಅಟೆಂಡ್ಆಗಲು ಆಗ್ಲಿಲ್ಲ.ಹಾಗೆ ನಾನು ಅಭಿಷೇಕ್ ಅವ್ರ ರೂಮಲ್ಲಿಇದ್ದೆ ಅವ್ರು ತುಂಬಾ ಪ್ರೀತಿ ಯಿಂದ ಮಾತಾಡ್ತಾ ಇದ್ರೂ. ನಂಗು ಗಾಬರಿ ಯಾಗ್ತಾ ಇತ್ತು. ಆದ್ರೆ ಅವ್ರು ತುಂಬಾಚೆನ್ನಾಗಿ ನನ್ ಜೊತೆ ಇದ್ರೂ. ಇದ್ರ ನಡುವೆ ನಂಗೆಒಂದು ಶಬ್ದ ಕೇಳಿ ನಡುಗಲಾರಂಭಿಸಿದೆ.ಮದ್ಯ ರಾತ್ರಿಯಾ ಸಮಯ ಆಗಿತ್ತು. ಮನೆ ಹೊಸ ಮನೆ ಹೊಸಜಾಗ ನಂಗೆ ತುಂಬಾ ಭಯ ಆಗ್ತಾ ಇತ್ತು.ಆದ್ರೆ ಆಕಿರುಚಾಟ ಜೋರಾಗಿ ಆಗ್ತಾ ಇತ್ತು. ನಂಗೆ ಅಲ್ಲಿಕುತ್ಕೋಳ್ಳಲು ಆಗ್ಲಿಲ್ಲ ಅಲ್ಲಿಂದ ಎದ್ದು ಸೀದಾ ಬಾಗಿಲತ್ರಹೋದೆ. ಮತ್ತೆ ಅಭಿಷೇಕ್ ನಾ ನೋಡಿದೆ!ಅಭಿಷೇಕ್ಎದ್ದು ನನ್ ಹತ್ತಿರ ಬಂದ್ರು ಆದ್ರೆ ಅವ್ರ ಮುಖದಲ್ಲಿಚಿಂತೆ ಇತ್ತು. ನಾನು ಕೇಳ್ದೆ ಇದೂ ಯಾರ್ ಸೌಂಡ್ಅಂತ? ಆಗ ಅಭಿಷೇಕ್ ನಂಗೇನು ಕೇಳಿಸಲಿಲ್ವಲ್ಲ!ಅವ್ರ ಮಾತಲ್ಲಿ ನಂಗೆ ಅನ್ನಿಸ್ತಾ ಇತ್ತು. ಅವ್ರು ಏನೋಬಚ್ಚಿಡೋಕೆ ನೋಡ್ತಾ ಇದ್ದಾರೆ ಅಂತ ನಾನು ಆದ್ರೂಬಾಗಿಲು ತೆಗ್ದೆ ಮುಂದೆ ನೋಡುದ್ರೆ ಒಬ್ಬ ಹುಡುಗಿವಿಚಿತ್ರ ವಾಗಿ ಇದ್ಲು.

ಎಷ್ಟೋ ದಿನಗಳು ಆಗಿತ್ತುಕಾಣುತ್ತೆ ಕೂದಲನ್ನ ಮಾಡಿ ಡ್ರೆಸ್ ಚೇಂಜ್ ಮಾಡಿಮತ್ತೆ ಜೋರಾಗಿ ಕಿರುಚಿತ್ತ ಇದ್ಲು. ನನ್ನ ಬಿಡಿ ಬಿಟ್ಟುಬಿಡಿ ಅಂತ ಅಭಿಷೇಕ್ ಹೊರಗಡೆ ಹೋಗಿ ಅಪ್ಪ ಅಪ್ಪಅಂತ ಜೋರಾಗಿ ಕಿರುಚುತ್ತ ಇದ್ದ!ಆಗ ರೂಮಿನಿಂದಮಾವ ಬಂದ್ರು ಏನಾಯ್ತೋ ಆಗ ನೋಡಪ್ಪ, ಮುಂದೆನೋಡುದ್ರೆ ಅಯ್ಯೋ ಇವ್ಳ ಇಲ್ಲಿ ಏನೋ ಮಾಡ್ತಾಇದ್ದಾಳೆ.ಅಂತ ಬಲವಂತ ವಾಗಿ ಎಳ್ಕೊಂಡು ಹೋಗ್ತಾಇದ್ರೂ ಅವ್ಳು ಬಿಡಿ ನನ್ನ ಅಂತ ಹೇಳುದ್ರು ಕೇಳ್ದೆಒಂದು ರೂಮಿಗೆ ಹಾಕಿ ಬಾಗಿಲುಗೆ ಚಿಲ್ಕ ಹಾಕಿದ್ರು.ಮತ್ತೆ ಒಂದು ದೊಡ್ಡ ಬೀಗ ಹಾಕುದ್ರು.ಮತ್ತೆ ಹೋಗಿ ಮಲ್ಕೊಂಡ್ರೂ. ನನಗೆ ಏನು ಎತ್ತ ಅಂತಅರ್ಥ ಆಗ್ತಾ ಇರಲಿಲ್ಲ. ನನ್ನು ಅಭಿಷೇಕ್ ಬಲವಂತವಾಗಿಹೇಳ್ಕೊಂಡು ಹೋದರು ರೂಮಿಗೆ! ಎಲ್ಕೊಂಡು ಹೋಗಿರೂಮಿನ ಬಾಗಿಲು ಹಾಕಿ ಚಿಲ್ಕ ಹಾಕಿದ. ಮತ್ತೆ ತುಂಬಾಕೋಪದಲ್ಲಿದ್ದ! ನಾನು ಇದೇನ ಅಭಿಷೇಕ್ ಯಾರುಯತ್ತ ಅಂತ ಕೇಳ್ತಾ ಇದ್ದೆ.ಆಗ ನನ್ನ ಅಲ್ಲಿ ಮಂಚದಲ್ಲಿಕೂರಿಸಿ, ಅಯ್ಯೋ ಅವ್ಳು ನನ್ ಹೆಂಡತಿ ಅದು ಅವಳುಮಾನಸಿಕವಾಗಿ ಅಸ್ವಸ್ತಾ ಆಗಿದ್ದಾಳೆ!ಅವ್ಳುಸರಿಯಾಗ್ತಾಳೆ ಅಂತ ಅನ್ಕೊಂಡ್ವಿ ಆದ್ರೆ ಅವ್ಳುಸರಿಯಾಗ್ಲಿಲ್ಲ. ಮತ್ತೆ ಮನೆಗೆ ಬಂದವರ ಮೇಲೆಲ್ಲಾಅಟೆಕ್ ಮಾಡತಾಳೆ ಹಾನಿ ಮಾಡೋಕೆ ನೋಡತಾಳೆ!ಅದಕ್ಕೆ ಅವಳನ್ನ ರೂಮಿನಲ್ಲಿ ಕುಡಕಿರೋದು!ಮತ್ತೆ ಇವ್ಳ ಬಗ್ಗೆ ಗೊತ್ತಾಗಿ ಎಷ್ಟೋ ಸಂಬಂಧ ಗಳುಮುರಿದು ಹೋಗಿತ್ತು ಅದುಕೋಸ್ಕರ ನಾವು ನಿಮ್ಹತ್ರ ಹೇಳಿಲ್ಲ ಈ ಮಾತನ್ನು!ಮತ್ತೆ ನಿನ್ನ ಅವ್ಳುಹನಿಗೋಳಗಾಗಿ ಮಾಡತಾಳೆ ಅಂತ ನಾನು ಹಾಗೆಎಳ್ಕೊಂಡು ಬಂದಿದ್ದು ಅಂತ ಹೇಳಿ ಬೇಜಾರ್ಮಾಡುದ್ರು. ನಂಗೆ ತುಂಬಾ ಬೇಜಾರ್ ಆಯ್ತು. ಮತ್ತೆನಾನು ಕ್ಷಮೆ ಕೇಳ್ದೆ!ಹಾಗೆ ಆ ದಿನ ಕಲಿತು. ಹಾಗೆ ನಾನುಮನೆಯ ಜವಾಬ್ದಾರಿಯನ್ನು ತಕ್ಕೊಂಡಿದ್ದೆ. ಆದರೆನಾದಿನಿಯ ರೂಮಿಗೆ ಯಾವಾಗಲೂ ಬೀಗಹಾಕುತ್ತಿದ್ದರು. ಟೈಮ್ ಟೈಮಿಗೆ ಸರಿಯಾಗಿ ನನ ಗಂಡಅಥವಾ ಮಾವ ಅವಳಿಗೆ ಊಟ ತಿಂಡಿ ತಗೊಂಡುಹೋಗಿ ಕೊಡ್ತಾ ಇದ್ರು. ಆದ್ರೆ ಒಂದು ಅಲ್ಲಿಗೆ ಸಂಜೆ ಹೊತ್ತಿಗೆ ಒಬ್ಬ ಸಿಸ್ಟರ್ ಬರ್ತಾ ಇದ್ಲು, ಮತ್ತೆ ಅವಳನ್ನಒಳಗಡೆ ಕಳಿಸ್ತಾ ಇದ್ರು. ಅವ್ಳು ಹೋದ್ರೆ ಒಳಗೆನಾದಿನಿಯ ಸೌಂಡೇ ಬರ್ತಾ ಇರಲಿಲ್ಲ.

ಆದ್ರೆ ಬೇರೆಯಾರನ್ನು ಮಾವ ಕಳಿಸ್ತಾ ಇರ್ಲಿಲ್ಲ. ಹಾಗೆ ದಿನಗಳುಕಳಿತು. ನಾನು ಆ ಸಿಸ್ಟರ್ ಜೊತೆ ಮಾತಾಡೋಕೆನೋಡಿದಾಗ ಅವ್ಳು ಗಾಬರಿಯಿಂದ ನೇ ಇರ್ತ ಇದ್ಲು.ಮತ್ತೆ ಸರಿಯಾಗಿ ಏನು ಮಾತಾಡ್ತಾ ಇರ್ಲಿಲ್ಲ.ನಾನು ಸುಮ್ನೆ ಆದೆ. ಒಂದು ದಿನಾ ರಾತ್ರಿ ನನ್ಗಂಡ ಮತ್ತೆ ಮಾವ ಮಾತಾಡತಾ ಇದ್ರೂ. ನಾನುಟೀ ಕೊಡಲು ಹೋದೆ!ಆಗ ನನ್ ಮಾವ ನಿಂಗೆಇನ್ನು ಸಾಕಾಗಿಲಿಲ್ವಾ!ಯಾವಾಗ್ ಪ್ಲಾನಿಂಗ್ಪ್ರಕಾರ ಮಾಡ್ತೀಯ!ಇಲ್ಲಾಂದ್ರೆ ನಮಗೆ ತಿನ್ನಲುಏನು ಇಲ್ಲ. ನಿನ್ ಹೆಂಡಿಗೆ ಕೆಲಸ ಕೊಡು. ಆಗಅಯ್ಯೋ ಅಪ್ಪ ಹೇಗೋ ಅತ್ತಿಗೆ ಪ್ರೆಂಗ್ನೆಟ್ ಇನ್ನುಸ್ವಲ್ಪ ದಿನಾ ತುಂಬಾ ದುಡ್ಡು ಸಿಗುತ್ತಲ್ಲ. ಅಯ್ಯೋನಾನು ನಿನ್ ಅಣ್ಣನ್ನ ಹೇಗೆ ಹೊರಗಡೆ ಕರ್ಕೊಂಡುಬರ್ತೀನಿ ಅಂತ ಇದ್ದೀನಿ. ನೀನು ಇನ್ನು ಅದನ್ನೇಕಾಯ್ತಾ ಇದ್ದಿಯಾ!ನೀನು ನಿನ್ ಹೆಂಡತಿ ಗೆಕೆಲಸ ಕೊಡು. ಅಂತ ಹೇಳ್ತ ಇದ್ರೂ. ನಂಗೆ ಏನುಇವ್ರದು ಇದೆ ಅಂತ ಅನ್ಕೊಂಡೆ!ನಾನು ಅಲ್ಲಿಂದಬಂದೆ ಅವ್ರಿಗೆ ನಾನು ಕೇಳಿಸ್ಕೊಂಡು ಇದ್ದದ್ದುಗೊತ್ತಾಗಬಾರ್ದು ಅಂತ ಹೋದೆ!ನಂಗೆ ಏನು ಅಂತತಿಳ್ಕೊಲ್ಲೆ ಬೇಕು ಅಂತ ಇದ್ದೆ!ನಾನು ಮಾರನೇ ದಿನಾಸಿಸ್ಟರ್ ಹತ್ರ ಕೇಳಲು ಪ್ರಯತ್ನ ಮಾಡ್ದೆ!ಆದ್ರೆನನ್ ಅವ್ರು ಏನು ಹೇಳಲು ರೆಡಿ ಇರ್ಲಿಲ್ಲ. ಮತ್ತೆಎಲ್ಲದಕ್ಕೂ ಮಾವ ನೋಡ್ತಾ ಇದ್ರೂ. ಮಾವ ಇಲ್ಲದಟೈಮ್ ನಲ್ಲಿ ಆ ಸಿಸ್ಟರ್ ನಾ ಎಳ್ಕೊಂಡು ರೂಮಿಗೆಕರ್ಕೊಂಡು ಹೋದೆ ಆಗ ನಾನು ಕೇಳ್ದೆ ಆ ಹುಡುಗಿಯಾರು ಮತ್ತೆ ಅವ್ಳು ಅರೋಗ್ಯ ಸರಿ ಇಲ್ವಾ!ಅಂತಆಗ ನಂಗೆ ಏನು ಗೊತ್ತಿಲ್ಲ ಮತ್ತೆ ನಂಗೆ ಸರಿಯಾಗಿಅವ್ಳು ಜೊತೆ ಮಾತಾಡೋಕು ಆಗಲ್ಲ ಅಲ್ಲಿ ಕ್ಯಾಮರಾಎಲ್ಲಾ ಮಡಗಿದ್ದಾರೆ ಅದಕ್ಕೆ ಅವಳ ಮಾತು ಗೆ ನಾನುಹಿಂದೂರಿಗಿ ಏನು ಹೇಳಲ್ಲ ಅಂತ. ಹಾಗೆ ಹೋದ್ಲುಇಲ್ಲೂ ಯಾವದೇ ಲ್ಯಾಪ್ ಟ್ಯಾಪ್ ಇರ್ಲಿಲ್ಲ. ಮತ್ತೆಇಬ್ಬರ ಮೊಬೈಲ್ ನಲ್ಲೆ ಇರುತ್ತೆ ಅವ್ರ ಮೊಬೈಲ್ ನಾಹೇಗಾದ್ರು ಹಾಳು ಮಾಡಬೇಕು. ಅದಕ್ಕೂ ಮೊದಲುಬೀಗ ತೆಗೀಬೇಕು ಅಂತ ನಾನು ರಾತ್ರಿ ಮಾವನ ರೂಮಿಗೆಹೋದೆ. ಹುಡುಕಿದೆ ಎಲ್ಲೂ ಇರ್ಲಿಲ್ಲ ಕೊನೆಗೆ ಮಾವಆ ಕಡೆ ತಿರುಗಿದಾಗ, ದಿಂಬಿನ ಅಡಿಯಲ್ಲಿ ಇತ್ತು.ಆದ್ರೆ ನಾನು ಸೋಪು ತೆಕೊಂಡು ಬಂದಿದ್ದೆ!ಮತ್ತೆ ದಿಂಬಿನಅಡಿಯ ಕೀ ತೆಗದು ಅದರ ಹಚ್ಚಣ್ಣ ಸೋಪಿಗೆ ಮಾಡಿಮೆಲ್ಲಗೆ ಹೋದೆ. ಮಾರನೇ ದಿನಾ ಮಾವಮಾತಾಡ್ಕೊಂಡು ಬರ್ತಾ ಇದ್ರೂ ಬೇಕು ಅಂತಸ್ಪೀಡ್ ಆಗಿ ಹೋಗಿ ಮಾವನ ಡಿಕ್ಕಿ ಹೊಡೆದೆ!ಕೊನೆಗೆ ಮೊಬೈಲ್ ಕೆಳಗೆ ಬೀಳ್ತು. ಮತ್ತೆ ಮೊಬೈಲ್ಹೊಡೆದೋಯ್ತು. ಮತ್ತೆ ನನ್ ಗಂಡ ಬಾಥ ರೂಮ್ಗೆಹೋದಾಗ ಅವ್ರ ಮೊಬೈಲ್ ನೀರಿಗೆ ಹಾಕಿ ಮತ್ತೆಅಲ್ಲಿಯೇ ಹೋಗಿ ಮಡಗಿದ್ದೆ!ಮತ್ತೆ ಗಂಡ ನೋಡುದ್ರೆಮೊಬೈಲ್ ಆನ್ ಆಗ್ತಾನೆ ಇರ್ಲಿಲ್ಲ. ನನ್ ಪ್ಲಾನ್ಸೆಕ್ಸಿಸ್ ಆಗಿತ್ತು. ಮತ್ತೆ ನಾನು ಸಿಸ್ಟರ್ ಗೆ ಹೇಳಿಕೀ ಮಾಡಿಸಿ ಇಸ್ಕೊಂಡ್ ಇದ್ದೆ. ಇಬ್ಬರು ಮೊಬೈಲ್ರೆಡಿ ಮಾಡ್ಸಲು ಹೋದ್ರು. ಅದೇ ಸಮಯಕ್ಕೆ ನಾನುಅವಳ ರೂಮಿಗೆ ಹೋದೆ. ಅವಳಿಗೆ ನನ್ನ ನೋಡಿಖುಷಿಯಾಯ್ತು. ನಾನು ಹೋಗು ಹತ್ರ ಕುತ್ಕೊಂಡೆ!ಆಗ ಅವ್ಳು ನಿಂಗೆ ಹೇಗೆ ಬರೋದಕ್ಕೆ ಆಯ್ತು.ಆಗ ಅದೆಲ್ಲ ಬಿಡು ನಂಗೆ ಸ್ವಲ್ಪ ಸ್ವಲ್ಪ ಗೊತ್ತಾಗಿದೆನೀನು ಕಷ್ಟದಲ್ಲಿ ಇದ್ದಿಯಾ ಅಂತ!ನಾನು ನಿನ್ನರಕ್ಷಣಾ ಮಾಡಲು ಬಂದೆ ಮೊದಲು ಹೇಳು ಏನಾಗಿತ್ತುಅಂತ ಆಗ ನಾನು ನಿನ್ ಗಂಡನ ಅಣ್ಣನ ಹೆಂಡತಿ.ಅವ್ರು ನನ್ನ ಮದ್ವೆ ಮಾಡ್ಕೊಂಡ್ ಕರ್ಕೊಂಡು ಬಂದ್ರು.ಆದ್ರೆ ನಂಗೆ ಮೊಬೈಲ್ ಕೊಡಿಸಿರ್ಲಿಲ್ಲ. ಹಾಗೆ ನಾನುಪ್ರೆಗ್ನೆನ್ಟ್ ಆದೆ. ತುಂಬಾ ಚೆನ್ನಾಗಿ ಯೇ ಇದ್ರೂ.ಆದ್ರೆ ನಾನು ಹೆರೋವರೆಗೆ ಎಲ್ಲಾ ಕರೆಟ್ಟಾಗಿ ಇತ್ತು.

ಮತ್ತೆ ನನ್ ಮಗುನ ಹೆತ್ತ ಮೇಲೆ ಅದನ್ನ ತುಂಬಾದುಡ್ಡಿಗೆ ಮಾರಿದರು. ಅವ್ರ ಇದೆ ಕೆಲಸ ಆಗಿತ್ತು.ಇದುಕೋಸ್ಕರ ಕಾಯ್ತಾ

ಇದ್ರೂ. ನಾನು ಮಗುಕೋಸ್ಕರ ರಿಯಾಕ್ಟ್ ಮಾಡಿದ್ದಾಗತುಂಬಾ ಟಾರ್ಚರ್ ಮಾಡಿದ್ರು. ನಾನು ನನ್ಮಗುಕೋಸ್ಕರ ತುಂಬಾ ಕೂಗಾಡ್ತಾ ಇದ್ದೆ!ಅದಕ್ಕೆಅವ್ರು ನಾನು ಹುಚ್ಚಿ ಆಗಿದ್ದೀನಿ ಅಂತ ಹೇಳ್ತ ಇದ್ರೂ.ಮತ್ತೆ ಇನ್ನೊಂದು ಮಗು ಹೆರೋದಕ್ಕೆ ತುಂಬಾಟಾರ್ಚರ್ ಮಾಡುದ್ರು. ಆದ್ರೆ ನಾನು ಒಪ್ಪಲಿಲ್ಲ.ನಾನು ಒಪ್ಪದಕ್ಕೆ ಹೊಡೆದು ಹೊಡೆದು ಅರ್ಧ ಜೀವಮಾಡಿದ್ರು. ನನ್ನ ನೋಡೋದಕ್ಕೆ ಅಪ್ಪ ಅಮ್ಮ ಬಂದ್ರುಆದ್ರೆ ಮುಂದೇನೆ ನನ್ ಗಂಡ ಮತ್ತೆ ನನ್ ಮಾವನಿಲ್ತಾ ಇದ್ರೂ ಏನು ಹೇಳೋದಕ್ಕೂ ಬಿಡ್ತಾ ಇರ್ಲಿಲ್ಲ.ಮತ್ತೆ ಮೊದ್ಲೇ ಹೆದರಿಸಿ ಬಿಡ್ತಾ ಇದ್ರೂ ಏನುಹೇಳ್ಬರ್ದು ಅಂತ. ಆದ್ರೆ ನಾನೂ ಮೆಲ್ಲಗೆ ನನ್ಅಮ್ಮನ್ ಮೊಬೈಲ್ ಈಸ್ಕೊಂಡೆ ಕಣ್ಣಿನ ಸನ್ನೆಯಿಂದಮತ್ತೆ ನನ್ ಗಂಡ ಹೇಳಿದ್ದನ್ನೆಲ್ಲ ರೆಕಾರ್ಡ್ ಮಾಡ್ದೆ!ಮತ್ತೆ ಪೊಲೀಸ್ ಗೆ ಕಳುಸಿದೆ. ಹಾಗೆ ನನ್ ಗಂಡನನ್ನಅರೆಸ್ಟ್ ಮಾಡುದ್ರು. ಆದ್ರೆ ನಿನ್ ಗಂಡ ಮತ್ತೆ ನಿನ್ಮಾವನ ಸತ್ಯ ಹೊರಗಡೆ ಬರ್ಲಿಲ್ಲ. ಕೊನೆಗೆ ನಾನೂಅಪ್ಪ ಅಮ್ಮನ್ ಮನೆಗೆ ಹೋದೆ. ನಾನೂ ಹೊರಗಡೆಹೋದಾಗ ನನ್ನ ಕಿಡ್ನಾಪ್ ಮಾಡ್ಕೊಂಡ್ ಬೇರೆ ಊರಿಗೆಕರ್ಕೊಂಡು ಬಂದಿದ್ದಾರೆ. ನನ್ ಅಪ್ಪ ಅಮ್ಮ ನನ್ನಹುಡುಕ್ತಾ ಇರ್ಬಹುದು. ಅವ್ರಿಗೆ ಮೊದ್ಲೇ ಗೊತ್ತಿತ್ತುನಾನೂ ಪ್ರೆಗ್ನೆಟ್ ಅಂತ ಹಾಗೆ!ಈಗ ನನ್ ಮಗುನಕಾಯ್ಕೊಂಡು ಇದ್ದಾರೆ ಮತ್ತೆ ನನ್ನ ಹುಚ್ಚಿ ಅಂತ ಪ್ರೂಮಾಡಿ ನನ್ನ ಹುಚ್ಚರ ಆಸ್ಪತ್ರೆಗೆ ಬಿಡ್ತಾರೆ!ಮತ್ತೆ ಮಗನನ್ನುಹುಚ್ಚಿ ಅಂತ ಬಿಡಿಸ್ಕೊಂಡು ಕರ್ಕೊಂಡು ಬರ್ತಾರೆ.ಅಂತ ಪ್ಲಾನಿಂಗ್ ಅವ್ರದು ನನ್ನ ಹೇಗಾದ್ರುಬಿಡಿಸ್ಕೊಂಡು ಹೋಗತಿಯ ಮತ್ತೆ ನಿನ್ನನ್ನುಮಾಡ್ಕೊಂಡು ಇದೆ ಮಾಡಲು ಅನ್ಕೊಂಡು ಇರೋದು.ಅವರಿಬ್ಬರಿಬ್ಬರಿಗೂ ಯಾವದು ಕೆಲಸ ಇಲ್ಲ. ಇದರಿಂದನೇ!ಆಗ ನಾನೂ ಬಿಡಿಸ್ಕೊಂದು ಇವತ್ತು ರಾತ್ರಿ ನೇಕರ್ಕೊಂಡು ಹೋಗತೀನಿ ಅಂತ ಅನ್ಕೊಂಡು ಹೇಳ್ದೆ.ಅಷ್ಟರಲ್ಲಿ ಮಾವ ಬರೋ ಸೌಂಡ್ ಬಂತೂ. ನಾನೂಬೇಗ ಬೀಗ ಹಾಕಿ ರೂಮಿಗೆ ಹೊಟ್ಟೋದೇ!ಅವ್ರಿಗೆಯಾವದೇ ಡೌಟ್ ಬಂದಿರ್ಲಿಲ್ಲ. ರಾತ್ರಿ ನಾನೂ ಸಿಸ್ಟರ್ಹತ್ರ ಸಂಜೆ ಬರುವಾಗ ನಿದ್ದೆಯ ಮಾತ್ರೆ ತರಲುಹೇಳಿದ್ದೆ!ಹಾಗೆ ಅವ್ರು ತಂದು ಕೊಟ್ಟುದ್ರು. ಮತ್ತೆ ನಾನೂಅವ್ರಿಗೆ ಹಾಲಿನಲ್ಲಿ ಹಾಕಿ ಕೊಟ್ಟು ಕುಡಿಸಿದೆ!ಮತ್ತೆರಾತ್ರಿ ಅವಳನ್ನ ಕರ್ಕೊಂಡು ಹೋಗಲು ಪ್ರಯತ್ನಮಾಡುವಾಗ ನನ್ ಮುಂದೆ ಇಬ್ಬರು ಇದ್ದರು.ಮತ್ತೆ ನಂಗೆ ಶಾಕ್ ಅವ್ರು ಹೇಗೆ ಅಂತ!ಆಗ ಅವ್ರುನೀನು ಏನು ಅನ್ಕೊಂಡೆ ನಾವು ಆ ಸಿಸ್ಟರ್ ಕೊಟ್ಟಿದ್ದು,ನೀನು ಮಿಕ್ಸ್ ಮಾಡಿ ಕೊಟ್ಟಿದ್ದು ಎಲ್ಲಾ ನೋಡುದ್ವಿ!ಮತ್ತೆ ನಾವು ನಿನ್ ಮುಂದೆ ಕುಡಿಯೋತರ ನಾಟಕಮಾಡಿ ಮಲ್ಕೊಂಡ್ವಿ ನಿನ್ನ ರೆಡಿ ಹ್ಯಾಂಡ್ ಆಗಿಹಿಡಿಯೋದಕ್ಕೆ!ನೀವು ಇದ್ರೆ ಸರಿಯಾಗಲ್ಲ ನಿಮ್ಮನ್ನಸಾಯ್ಸಿದ್ರೆ ಒಳ್ಳೇದು!ನಮ್ಮ ಗುಟ್ಟು ಯಾರಿಗೂಗೊತ್ತಾಗಲ್ಲ!ಅಂತ ಹೇಳಿ ಸಾಯ್ಸಿಲು ಬಂದ್ರುಅಷ್ಟ್ ಹೊತ್ತಿಗೆ ಪೊಲೀಸ್ ಬಂದ್ರು ನೋಡುದ್ರೆ ಇದೂಸಿಸ್ಟರ್ ಅವ್ರನ್ನ ದೇವರಂತೆ ಕರ್ಕೊಂಡು ಬಂದಿದ್ರು.ನಾನೂ ಅವ್ರಿಗೆ ಸತ್ಯಂಶ ಹೇಳಿದ್ದೆ!ಹಾಗೆ!ಮತ್ತೆ ಅವ್ರನ್ನಅರೆಸ್ಟ್ ಮಾಡ್ಸಿ ಕರ್ಕೊಂಡು ಹೋದ್ರು.ಮತ್ತೆಗೊತ್ತಾಯ್ತು ಅವ್ರು ಬರಿ ನಮ್ಮ ಮಾತ್ರ ಅಲ್ಲ ಅದೆಷ್ಟೋಬಡವ ಹೆಣ್ಮಕ್ಕಳ ಜೀವನ ಜೊತೆಗೆ ಹೀಗೆ ಆಟ ಆಡಿಮೆಂಟಲ್ ಆಸ್ಪತ್ರೆಗೆ ಇಟ್ಟಿದ್ದಾರೆ ಅಂತ ಗೊತ್ತಾಯ್ತು.ಮತ್ತೆ ಅವ್ಳು ಅವಳ ಅಪ್ಪ ಅಮ್ಮನ ಮನೆಗೆ ನಾನೂನನ್ ಕರ್ಕೊಂಡು ಹೋಗಿ ಇದ್ದ ವಿಷಯ ಹೇಳಿಬಿಟ್ಟು ಬಂದ್ವಿ.ಮತ್ತೆ ನನ್ ಅಪ್ಪ ನಿಗೆ ತುಂಬಾ ದುಃಖಆಯ್ತು.ಈ ವಿಷಯ ತಿಳಿದ ಅಕ್ಕ ಅವ್ರ ಮನೆಗೆನಮ್ಮನ್ನ ಕರ್ಕೊಂಡಳು.ಹಾಗೆ ನಾನೂ ಒಂದುಕಂಪನಿ ಯಲ್ಲಿ ಕೆಲಸ ಮಾಡ್ತಾ ಇದ್ದೀನಿ…